ದ್ವಿತೀಯ ಪಿಯು ಗಣಿತ ಪತ್ರಿಕೆಗೆ 9 ಗ್ರೇಸ್ ಅಂಕ
ದ್ವಿತೀಯ ಪಿಯುಸಿ ಮೌಲ್ಯಮಾಪನದಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಮೊನ್ನೆಯಷ್ಟೇ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ಪ್ರಶ್ನೆ ನೀಡಿದ್ದ ಹಿನ್ನೆಲೆ 5 ಅಂಕಗಳನ್ನು ನೀಡಲು ಮೌಲ್ಯಮಾಪಕರಿಗೆ ಆದೇಶಿಸಿದ್ದ ಶಿಕ್ಷಣ ಇಲಾಖೆ ಈಗ ಮತ್ತೆ ಗಣಿತ ವಿಷಯದಲ್ಲಿ ಅಂತಹ ಎಡವಟ್ಟು ಮಾಡಿಕೊಂಡಿದೆ.
ಗಣಿತ ಪ್ರಶ್ನೆ ಪತ್ರಿಕೆಯಲ್ಲೂ ಸುಮಾರು 3 ಪ್ರಶ್ನೆಗಳನ್ನ ತಪ್ಪಾಗಿ ಮುದ್ರಿಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಮೌಲ್ಯಮಾಪಕರಲ್ಲಿ ಗೊಂದಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ 9 ಅಂಕ ನೀಡಲು ಇಲಾಖೆ ಮೌಲ್ಯಮಾಪಕರಿಗೆ ಸೂಚನೆ ನೀಡಲಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮಾತ್ರವಲ್ಲ ಇದೇ ರೀತಿಯಾಗಿ à²ೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲೂ ಇಂತಹದ್ದೇ ಗೊಂದಲ ಮೂಡಿದ್ದು, ಅಂಕಗಳನ್ನು ನೀಡುವಂತೆ ಇಲಾಖೆ ಮೌಲ್ಯಮಾಪಕರಿಗೆ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರಶ್ನೆ ಪತ್ರಿಕೆ ತಪ್ಪಾಗಿರುವ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರತಿಕ್ರಿಯೆ ನೀಡದೆ ಮೌನವಹಿಸಿದ್ದು, ಮೌಲ್ಯಮಾಪನದಲ್ಲಿ ಯಾವುದೇ ಗೊಂದಲಗಳಿಲ್ಲ. ಮೌಲ್ಯಮಾಪನ ಸರಾಗವಾಗಿ ನಡೆಯುತ್ತಿದೆ ಅಂತ ಹಳೇ ಉತ್ತರವನ್ನು ನೀಡಿದೆ.
ಇನ್ನು ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿರುವ ವಿಚಾರವನ್ನು ಮಾಧ್ಯಮದವರಿಗೆ ನೀಡಬಾರದು ಎನ್ನುವ ಮೌಖಿಕ ಆದೇಶವನ್ನು ಇಲಾಖೆ ಉಪನ್ಯಾಸಕರಿಗೆ ನೀಡಿದೆ ಎನ್ನುವ ಮಾಹಿತಿಗಳು ಪಬ್ಲಿಕ್ ಟಿವಿಗೆ ಲà²್ಯವಾಗಿವೆ.